Sunday, September 18, 2011

Rangasthala




ರಂಗಸ್ಥಳ
ಲೇಖಕಿ: ರಜನಿ
ಬರಹಕ್ಕೆ: ವಸಿಷ್ಠ

ಸೆಪ್ಟಂಬರ್ ನಾಲ್ಕನೇ ಭಾನುವಾರದಂದು ನಾನು, ನಮ್ಮೆಜಮಾನರು, ನನ್ನ ಮಗ, ಸೊಸೆ ಎಲ್ಲಾ ಒಟ್ಟಾಗಿ ಆಂದ್ರ ಕರ್ನಾಟಕದ ಸೀಮಾ ರೇಖೆಯಲ್ಲಿರುವ ಲೇಪಾಕ್ಷಿ ದೇವಸ್ಥಾನವನ್ನು ನೋಡಲು ಹೊರಟೆವು. 
ಚಿಕ್ಕಬಳ್ಳಾಪುರ ರಸ್ತೆಗೆ ಬಂದಾಗ ಇದ್ದಕಿದ್ದಂತೆ ನನ್ನ ಮಗ ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿನ ಕಡೆಗೆ ಕಾರನ್ನು ತಿರುಗಿಸಿದ.ನಮ್ಮವರು ಅಚ್ಚರಿಯಿಂದ ಕೂಗಿದರು, ಇದೇನೋ ಈ ಕಡೆಗೆ ಕಾರನ್ನು ತಿರುಗಿಸಿದೆ !! ಎಂದು.

ನಿಮಗೊಂದು ಅಚ್ಚರಿ ಕಾದಿದೆ ಎಂದವನೆ ಸ್ವಲ್ಪ ದೂರದಲ್ಲೆ ಒಂದು ಸುಂದರವಾದ ಪ್ರಾಚೀನವಾದ ದೇವಸ್ಥಾನದ ಮುಂದೆ ನಿಲ್ಲಿಸಿದ. ಈ ದೇವಸ್ಥಾನದ ಬಗ್ಗೆ ಅವನು ನೆಟ್ ನ ಸಹಾಯದಿಂದ ಮಾಹಿತಿ ಸಂಗ್ರಹಿಸಿದ್ದ. ನಮಗೆ ಯಾವುದೆ ಸುಳುಹು ಕೊಡದೆ ನಮ್ಮನ್ನು ಕರೆತಂದಿದ್ದ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿನ ಕಡೆಗೆ ಹೋಗುವಾಗ ೩ಕಿ.ಮಿ. ದೂರದಲ್ಲೆ ರಂಗಸ್ಥಳ ಸಿಗುತ್ತದೆ.

ಪೌರಾಣಿಕ ಹಿನ್ನಲೆಯಾಗಿ ಒಂದು ಕಥೆಯಿದೆ. ಶ್ರೀರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ, ಶ್ರೀರಾಮನು ವಿಭೀಷಣನಿಗೆ ಬೆತ್ತದ ಬುಟ್ಟಿಯಲ್ಲಿ ಶ್ರೀರಂಗನ ಮೂರ್ತಿಯನ್ನು ಇಟ್ಟುಕೊಟ್ಟು, ತಮಿಳುನಾಡಿನ ಶ್ರಿರಂಗಂನಲ್ಲಿ ಪ್ರತಿಷ್ಟಾಪಿಸಲು ತಿಳಿಸಿದ. ವಿಭೀಷಣನು ಅಂತೆಯೆ ಅದನ್ನು ಕೊಂಡೊಯ್ಯುತಿದ್ದ ಮಾರ್ಗದಲ್ಲಿ ಸಪ್ತಋಷಿಗಳು ಅವನನ್ನು ತಡೆದು ಈಗಿರುವ ಸ್ಥಳದಲ್ಲಿ (ರಂಗಸ್ಥಳದಲ್ಲಿ) ಭೂದೇವಿ ಹಾಗು ನೀಳಾದೇವಿ ಸಮೇತ ಸ್ವಾಮಿಯನ್ನು ಪ್ರತಿಷ್ಟಾಪಿಸಲು ಹೇಳಿದರು. ಈಗಲು ನಾವು ಗರ್ಭಗುಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬೆತ್ತದ ಬುಟ್ಟಿಯ ಆಕಾರದಲ್ಲಿರುವುದು ಕಂಡುಬರುತ್ತದೆ. 
Bamboo Basket Base
Ranga of Saligramashile

ದೇವಸ್ಥಾನದ ವಿಶೆಷತೆಯೆಂದರೆ, ಶ್ರೀರಂಗಂನ ಈಗಿನ ಮೂರ್ತಿಯು, ಶ್ರೀರಂಗಪಟ್ಟನದಲ್ಲಿರುವ ಮೂರ್ತಿಯು ಹಾಗು ಇಲ್ಲಿರುವ ಶ್ರೀರಂಗ ಮೂರ್ತಿಯು ಒಂದೇ ದಿನ, ಒಂದೇ ಮುಹೂರ್ತದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದೆ. 

ಶ್ರೀರಂಗಮೂರ್ತಿಯು ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ. ಪಂಚಹೆಡೆಯ ಆದಿಶೇಶನ ಮೇಲೆ ಯೋಗನಿದ್ರೆಯಲ್ಲಿ ಮಲಗಿರುವ ಸ್ವಾಮಿಯು ಭೂ , ನೀಳಾ ಸಮೇತನಾಗಿದ್ದಾನೆ. ಕೆಳಗಡೆ ವೈನತೇಯನ ಮೂರ್ತಿಯು ಇದೆ. ಗರ್ಭಗುಡಿಯ ಎರಡೂ ಪಾರ್ಶ್ವಗಳಲ್ಲಿ ಆಳ್ವಾರ್ಗಳ ಸುಂದರ ಮೂರ್ತಿಗಳು ರಾರಾಜಿಸುತ್ತಿದೆ. 
ಕಮನೀಯವಾದ ಆಕಾರದಲ್ಲಿರುವ ಶ್ರೀರಂಗನಾಥನನ್ನು ನೋಡುತ್ತಿದ್ದರೆ ಮನದ ಕಂಗಳಿಗೆ ಹಬ್ಬದ ಔತಣವೇ ಸರಿ !
ಗರ್ಭಗುಡಿಯ ಹೊರಗೆಯಿರುವ ದೇವಸ್ಥಾನದ ಪ್ರಾಕಾರವು ಮನಮೋಹಕವಾದ ಶಿಲ್ಪ ಕೆತ್ತನೆಗಳಿಂದ ಕೂಡಿದ ಚಚ್ಚೌಕಾರದ ಕಂಬಗಳ ಆಧಾರದ ಮೇಲೆ ಕಟ್ಟಲ್ಪಟ್ಟಿದೆ. ಈ ವಾಸ್ತುಶಿಲ್ಪವು ವಿಜಯನಗರದ ಶೈಲಿಯಲ್ಲಿದೆ.
Entrance






Pillared Hall


Homes of the Archakars

Gopuram
Kalyani

ಪ್ರಾಕಾರದ ಒಳಗೆ ಸುತ್ತಲು ಅರ್ಚಕರ ಮನೆಗಳಿವೆ. 
ದೇವಸ್ಥಾನದ ಹೊರಗಿರುವ ಹಳೆಯ ಗೋಪುರದ ಮೇಲೆ ಹೊಸ ಗೋಪುರವನ್ನು ಇತ್ತೀಚೆಗಷ್ಟೆ ನಿರ್ಮಿಸಿದ್ದಾರೆ. ದೇವಸ್ಥಾನದ ಈಶಾನ್ಯ ದಿಕ್ಕಿನಲ್ಲಿ ಪುಶ್ಕರಣಿಯಿದೆ. 



The author with daughter-in-law









ಪ್ರಶಾಂತವಾದ ವಾತಾವರಣವಿರುವ ಇಂತಹ ಸುಂದರ ಸ್ಥಳವನ್ನು ದರ್ಶಿಸಿದ ನಾವೇ ಧನ್ಯರು ಎಂದುಕೊಂಡೆವು.  

ದರ್ಶನದ ಸಮಯ: ಬೆಳಗ್ಗೆ - ೮:೦೦ - ೧೧:೦೦ 
                    ಹಾಗು ಸಂಜೆ: ೫:೩೦ - ೮:೩೦






No comments: