Showing posts with label kavana. Show all posts
Showing posts with label kavana. Show all posts

Sunday, July 26, 2009

SMS - kannada hani kavana


ನಮಸ್ಕಾರ
SMS ಇಂದ ಬಂದಂತಹ ಕೆಲವನ್ನು ಇಲ್ಲಿ ನಮೂದಿಸಲಾಗಿದೆ ....
ಓ ಕಾಲೆಜಿನ ಕನ್ಯೇ ||
ಚೆನ್ನಾಗಿದೆ ನಿನ್ನ ಕೆನ್ನೆ |
ನೋಡುತ್ತಾ ಕುಳಿತೆ ಮೊನ್ನೆ ||
ಪರಿಕ್ಷೆಯಲ್ಲಿ ಬಂತು ಬರೀ ಸೊನ್ನೆ | |

ಚೆಳುವಿಯ ಕಿರುನಗೆ ||
ಚೆಳುವನಿಗೆ FULL ಹೊಗೆ | |

ಹುಡುಗಿಯ ಸಿಹಿ ಮಾತು ||
ಹುಡುಗನಿಗೆ ಆಪತ್ತು | |

ಹುಡುಗಿಯ ಕುಡಿ ನೋಟ ||
ಹುಡುಗನಿಗೆ ಕೊನೆಯ ಚಟ್ಟ | |

Monday, July 7, 2008

ಸ್ನೇಹಿತೆ - ಸರಸ್ವತಿಯ ಕವನಗಳು

ನಮಸ್ಕಾರ,
ನನ್ನ ಸ್ನೇಹಿತೆ ಸರಸ್ವತಿಯ ಕೆಲವು ಕವನಗಳನ್ನು ಇಲ್ಲಿ ಪ್ರಕಟಿಸಿದ್ದೀನಿ ನೋಡಿ...

ನನ್ನೇಕೆ ನೀ ಈ ಪರಿ ಕಡೆಗನಿಸಿರುವೆ?
ತಿಳಿಯಿತು ನಾ ನಿನ್ನ ಹಾದಿಗೆ (ದಾರಿ) ಮುಳ್ಳಾಗಿರುವೆ...
ನನ್ನ ಬಹು ದಿನದ ಕನಸಿಗೆ ನೀ ಕ್ಷಣದಲಿ ತಣ್ಣೀರ್ ಎರಚಿರುವೆ
ಇಷ್ಟೆಲ್ಲಾ ನಡೆದರೂ ನಾನೇಕೆ ನಿನ್ನನೇ ಜಪಿಸುತಿರುವೆ !!!
----------
ನಿನ್ನ ಮಾತುಗಳು ನನ್ನ ಮನದಲ್ಲಿ ನಡೆಸಿದ ಸಂಘರ್ಶಗಳೆಷ್ಟೋ
ನಿನ್ನ ನೆನಪಲ್ಲೇ ನ ಕಂಡ ಕನಸುಗಳೆಷ್ಟೋ
ನಿನಗಾಗಿ ನಾ ತೀಡಿ ತೀಡಿ ಬರೆದ ಕವನಗಳೆಷ್ಟೋ
ನೀ ಬರುವ ಹಾದಿಯನ್ನೇ ಕಾಯುತ್ತಾ ಕಳೆದ ದಿನಗಳೆಷ್ಟೋ
ನಿನ್ನಿಂದ ಬರುವ ಪ್ರೇಮ ಸಂದೇಶಗಳಿಗಾಗಿ ಹಂಬಲಿಸಿದ ಕ್ಷಣಗಳೆಷ್ಟೋ
ನಿನ್ನ ಧ್ವನಿ ಆಲಿಸಿದೊಡನೆ ನನ್ನ ಮನದಲ್ಲಿ ಉದಯಿಸುವ ಭಾವನೆಗಳೆಷ್ಟೋ
ಈ ಎಲ್ಲದರ ಮಧ್ಯೆ ನನ್ನ ಮೇಲೆ ಎಳ್ಳಷ್ಟು ಪ್ರೀತಿ ಇರದ ನಿನ್ನ ಇಷ್ಟು ಹಚ್ಚಿಕೋಂಡಿರುವ ನಾನು ಮೂರ್ಕಳೆಷ್ಟೊ !!
-------
ನಿಮ್ಮ ಸರಸ್ವತಿ
(ಬರಹಕ್ಕೆ ವಸಿಷ್ಠ)

Monday, January 21, 2008

A gift from my mother


ಪ್ರೀತಿಯ ವಶು,
ಜನುಮದಿನಕ್ಕೆ ನಿನ್ನ ಪ್ರೀತಿಯ ಅಮ್ಮನ ಆಶೀಗಳು ಹಾಗು ಶುಭಾಶಯಗಳು. ನೆನಪಿಗೆ ಇದೊಂದು ಕವನದ ಉಡುಗೊರೆ:
ವಸಂತಗಳು ಕಳೆದುಹೋಗುತ್ತಿವೆ,
ನವವಸಂತದ ಆಗಮನವಾಗಲಿದೆ,
ನಿನ್ನ ಬಾಳಪಯಣದಲಿ
ಕನಸುಗಳ ಕಾಣುವ ವಯಸ್ಸು ನಿನ್ನದು
ಕಂಡರೆ, ದೋಡ್ಡ ಹೊಂಗನಸನ್ನೇ ಕಾಣು
ಆದರ್ಶದ ಹಿರಿಮೆಗರಿಮೆಯನ್ನು ಹೊಂಗಿರಣದಂತೆ
ಸೂಸುವ ಉನ್ನತ ಗುರಿ ಅದಾಗಿರಲಿ
ಅದರತ್ತ ಸಾಗುವ ಬಲ, ಸಾಧಿಸುವ ಛಲ
ನಿನ್ನದಾಗಲಿ, ಖಂಡಿತಾ ದೊರಕುವುದು ಫಲ.
ಕಂದನು ಕಾಣುವ ಹೊಂಗನಸು ನನಸಾಗಲಿ ಬೇಗ ಎನುತ್ತದೆ ಈ ತಾಯ ಮನಸ್ಸು.
ಇತಿ ನಿನ್ನ
ಅಮ್ಮ

Friday, July 27, 2007

ಕವನ - ೪

೪. ಕುಡಿಯದಿರಿ ಎಂದಿಗೂ ಪೆಪ್ಸಿಕೋಲಾ
ಎಲ್ಲೆಲ್ಲಿಯೂ ಈಗ ಇದರದ್ದೇ 'ಕೋಲಾ'ಹಲ
ಅದರಲ್ಲಿರುವುದು ಹಾಲಾಹಲ
ಕುಡಿಯುತ್ತಾ ಆಗುವಿರಿ ಹರೋಹರ

ಕವನ - ೩

೩. ಸರ್ಕಾರ ನೀಡುತಿತ್ತು ಪ್ರತಿದಿನ ಶಾಲಾ ಮಕ್ಕಳಿಗೆ
ಮಧ್ಯಾಹ್ನದ ಊಟ
ತಿಂದ ಮಕ್ಕಳು ಮಾಡಿದರು ಓದಿಗೆ ಟಾಟ
ಮಲಗಿದರು ಕೇಳುತ್ತಾ ಪಾಠ

Tuesday, July 24, 2007

ಕವನ - ೨

೨. ಎಂದಿನಂತೆ ಬಂತು ದೀಪಾವಳಿ
ಮಾಡಿದ ಅಳಿಯ ಮಾವನ ಮನೆಗೆ ದಾಳಿ
ಮಾಡಲಿಲ್ಲ ಅವನು ಜಾಗ ಖಾಲಿ
ಮಾವ ಆಗುವ ತನಕ ದಿವಾಳಿ

Monday, July 23, 2007

ಕವನಗಳು - ೧

ನನ್ನ ಸ್ನೇಹಿತೆ ಬರೆದ ಕೆಲವು ಕವನಗಳು

೧. ಅವನು ಮಾಡಿದ್ದ Degree
ಆದರು ಅವನಲ್ಲುತ್ತು hungry
ಏಕೆಂದರೆ ಅವನು ಹೋದಲೆಲ್ಲಾ ಇದ್ದದ್ದು ಒಂದೇ
ಕೆಲಸ ಕಾಲಿಯಿಲ್ಲ ಹೋಗ್ರಿ