ಲೇಕಖಿ : ರಜನಿ
ಬರಹಕ್ಕೆ : ವಸಿಷ್ಠ
ಪ್ರೀತಿಯ ವಶು, ಆರಭಿಗೆ - ಪ್ರಥಮ ವಾರ್ಷಿಕ ವೈವಾಹಿಕ ಸಂಭ್ರಮಕ್ಕೆ ಹಾರ್ದಿಕ ಶುಭಕಾಮನೆಗಳು.
ಬಾಳ ಬಟ್ಟೆಯಲಿ ಶುಭಮುಹೂರ್ತದಲಿ
ನೀವಿಬ್ಬರು ಜೊತೆಯಾದಿರಿ
ವಿವಾಹ ಬಂಧನದಲಿ ಸೆರೆಯಾದಿರಿ
ವರುಷದ ಹೆಜ್ಜೆಯನ್ನು ಹರುಷದಲಿ ಕ್ರಮಿಸಿದಿರಿ || ೧ ||
ಹೀಗೆಯೇ ಚಂದದಲಿ ನಿಮ್ಮ ಬದುಕಿನ ಬಂಡಿಸಾಗಲಿ
ಗುರಿ ತಪ್ಪದಿರಲಿ ಹಳಿ ತಪ್ಪದಿರಲಿ || ೨ ||
ಬಾಳ ಬಾಂದಳದಲಿ ಮುದತರುವ
ಅತಿಥಿಯ ಆಗಮನವಾಗಲಿ
ನಲಿವಿನ ಗೆಜ್ಜೆಯ ನಾದ ತರಂಗಗಳೇಳಲಿ
ಸಂತಸದ ಹೊಂಬೆಳಕು ಎಲ್ಲೆಲ್ಲೂ ತುಂಬಲಿ
ಚೆಲುವಿನ ಚಿತ್ತಾರದ ರಂಗು ರಂಗಾಗಲಿ || ೩ ||
ಹಿರಿಯರ ಹಾರೈಕೆಯ ಪರಿಯು
ಒಲವಿನ ಜೋಗುಳದ ಸಿರಿಯು
ಒಟ್ಟಾಗಿ ಕೂಡಿ ಬರಲಿ
ಗೆಲುವಿನ ಸೋಪಾನವು ಸುಲಭದಲಿ ನಿಲುಕಲಿ || ೪ ||
ಎಂದು ಹಾರೈಸುವ, ಆಶೀರ್ವಾದಿಸುವ
ನಿಮ್ಮ ಅಮ್ಮ
1 comment:
Beautiful poem & blessings for nice & cute couple :)
Best wishes from my side tooo..
(I didn't know that Aunty has got a such a wonderful talent!!):)
Post a Comment