Thursday, July 19, 2007

777-73_shanti_nivasa

ಒಂದು ವಾರದ ಹಿಂದೆ ಅವಿರತ ಗ್ರೂಪಿಂದ ಒಂದು ಮೈಲ್ ಬಂದಿತು. ೭-೭-೭ನೇ ತಾರಿಖು PVR ನಲ್ಲಿ ರಾತ್ರಿ ೯:೨೦ಕ್ಕೆ ಸುದೀಪ್ ಅಭಿನಯಿಸಿದ #೭೩ ಶಾಂತಿ ನಿವಾಸ ಸಿನಿಮಾ ಪ್ರದರ್ಶಿಸಲಾಗುವುದೆಂದು.ಅದು ರೋಟರಿ ಕ್ಲಬ್ ಸಹಕಾರದೊಂದಿಗೆ ಅಂಥ.ಸರಿ ನನಗೆ ಹಾಗು ನನ್ನ ಅಕ್ಕಳಿಗೆ ಎರಡು ಟಿಕೆಟ್ (೩೦೦ /- ಒಂದಕ್ಕೆ , ಯಾಕೆ?) ಖರಿದಿಸಿದೆ.
೭-೭-೭ ಬಂದೇ ಬಿಟ್ಟಿತು.ರಾತ್ರಿ ೭:೩೦ ಆಗಿತ್ತು.ನನ್ನ ಅಕ್ಕಳ ಮಗಳನ್ನು ಅಜ್ಜಿ ಮನೆಗೆ ಬಿಟ್ಟು ಇನ್ನೇನು ಹೊರಡಬೇಕು ಆಗ scooty ಯ ಹಿಂದಿನ ಚಕ್ರ ಪಂಚರ್ !!! ಸರಿ ಸರ್ವಿಸ್ ಸ್ಟೆಶನ್ ಗೆ ಹೊದ್ವಿ.ಮನೆ ಹತ್ತಿರಾನೆ ಇದ್ದುದರಿಂದ ತಳ್ಳಿಕೊಂಡೆ ಹೊದ್ವಿ.ಅವನೊ ಶಟರ್ ಹಾಕುತಿದ್ದ.ನಮ್ಮ ಅದೃಷ್ಟ ಅವನು ಗೊತಿದ್ದ ಕಾರಣ ರಿಪೇರಿ ಮಾಡಿದ.ಮನೆ ಇರೊದು ಆರ್.ಪಿ.ಸಿ ಲೇ ಔಟ್ ಅಲ್ಲಿ.ಇಲ್ಲಿಂದ PVRಗೆ ಹೊಗುವ ಹೊತ್ತಿಗೆ ೯:೩೦.ನಮ್ಮ ದುರಾದೃಷ್ಟಕ್ಕೆ ಅವತ್ತೆ ಎಲ್ಲಾ ಟ್ರಾಫಿಕ್ ಸಿಗ್ನಲ್ಸ್‌ಗೆ ಸಿಕ್ಕಿಹಾಕಿಕೊಂಡೆವು.ಆದರು ನಮ್ಮ ಅದೃಷ್ಟ ಸಿನಿಮಾ ಶುರುವಾಗಿರಲಿಲ್ಲ,ಕಾರಣ ಸುದೀಪ್ ಬಂದಿರಲಿಲ್ಲ !!
ಆಶ್ಚರ್ಯ ಮಾ.ಹಿರಣಯ್ಯಾ, ಸುದೀಪ್,ಚಿತ್ರಶ್ರಿ,ಅನು ಪ್ರಭಾಕರ್,ವಿನಾಯಕ ಜೂಶಿ ಎಲ್ಲಾ ಬಂದಿದ್ದರು.ಸರಿ ಅವರನ್ನು ಜನರ ಗುಂಪಿನೊಂದಿಗೆ ಮಾತನಾಡಿಸಿ, ಅವರ ಆಟೊಗ್ರಾಫ್ ತೆಗೆದುಕೊಂಡು ತಿಯೆಟರ್ ಒಳಗೆ ಹೊದೆವು.
ನಾವು ಕೂತಿದ್ದು ೭ನೇ ಸಾಲಿನಲ್ಲಿ, ೭ ಹಾಗು ೮ನೇ ಸೀಟ್‌ಗಳಲ್ಲಿ.ಎಂಥಾ ಆಕಸ್ಮಿಕ!! ಸಿನಿಮಾ ಶುರುವಾಗುವುದಕ್ಕು ಮುಂಚೆ ಬಂದಿದ್ದ ನಟ,ನಟಿಯರ ಹಾಗು ರೊಟರಿ ಕ್ಲಬ್ ಮುಖ್ಯ ರೊವಾರಿಗಳ ಪರಿಚಯವಾಯಿತು.ಆಗ ತಿಳಿಯಿತು ದುಬಾರಿ ಟಿಕೆಟ್ ಬೆಲೆಯ ಉದ್ದೇಶ.
ಈ ಸಹಾಯಾರ್ತ ಬಂದ ಹಣವನ್ನು ೨ ಮುಖ್ಯ ಕೆಳಸಗಲಿಗೆ ಉಪಯೊಗಿಸಲಾಗುವುದು:
೧. ಶ್ರೀ ಕ್ರಿಷ್ನ ಸೇವಾಶ್ರಮ ಆಸ್ಪತ್ರೆ - ಜೆ.ಪಿ.ನಗರ ಬೆಂಗಳೂರಿಗೆ ನೀಡಲಾಗುವುದು. ಅವರು ಈ ಹಣವನ್ನು ಪ್ರತಿ ದಿನ ಒಬ್ಬ ಆರ್ಥಿಕವಾಗಿ ಹಿಂದುಳಿದ ರೊಗಿಗೆ ಉಚಿತವಾಗಿ DIALYSIS ಮಾಡಲು ಉಪಯೊಗಿಸುತ್ತಾರೆ.
೨. ಚಾಮರಾಜ ನಗರದ ಯಲಂದೂರಿನ ಬಲಿ ರಾಯನ ದೊಡ್ಡಿಯಲ್ಲಿ ವೀರಪ್ಪನ್ ಇಂದ ತೊಂದರೆಗೆ ಒಲಪಟ್ಟ ಗಿರಿಜನರಿಗಾಗಿ ಕಟ್ಟೀಸಿರುವ ಸರ್ಕಾರಿ ಶಾಲ ಮಕ್ಕಳಿಗೆ ಪುಸ್ತಕ,ಬೆನ್ಚು,ಇತ್ಯಾದಿಕೆಲಸಗಳಿಗೆ ಉಪಯೊಗಿಸಲಾಗುವುದು.
೧೦:೩೦ ಕ್ಕೆ ಸಿನಿಮಾ ಶುರುವಾಯಿತು.ಸಿನಿಮಾ ಬಹಳಾ ಚೆನ್ನಾಗಿ ಮೂಡಿ ಬಂದಿದೆ.ಮಧ್ಯಂತರ ಬಂದಾಗ ಚಹಾ ಹಾಗು ಬಿಸ್ಕೆಟ್ ಇತ್ತು.ನನ್ನ ಅಕ್ಕ ಪಾಪ್‌ಕಾರ್ನ್ ಬೇಕೆಂದು ಹೇಳಿದಳು.ಸರಿ ಜಾಸ್ತಿ ಹಣವನ್ನೇ ತೆತ್ತು(೫೦/- ಅಬ್ಬಾ ಒಂದು ದಿನಆರಮವಾಗಿ ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು!!) ದೊಡ್ಡ ಪಾಪ್‌ಕಾರ್ನ್ ಅನ್ನೇ ತೆಗೆದುಕೊಂಡು ಹಿಂದಿರುಗಿದೆವು.ಸಿನಿಮಾ ಮತ್ತೆ ಶುರುವಾಗುವುದಕ್ಕು ಮುಂಚೆ ಒಂದು ಚಿಕ್ಕ ಪ್ರಶ್ನೊತರ ಇತ್ತು. ಬಹಳ ಮಜಾ ಬಂತು.ಮೊದಲ ಪ್ರಶ್ನೆಗೆ ನನ್ನ ಅಕ್ಕಳೇ ಕೈ ಎತ್ತಿದಳು;ಚಾನ್ಸ್ ಸಹ ಸಿಕ್ಕಿತು.ಸರಿಯಾಗಿ ಉತ್ತರಿಸಿದ ನಂತರ ಒಂದು ದೊಡ್ಡ ಬಕೆಟ್(ನಾವು ಕೊಂಡ ನಾಲ್ಕರಷ್ಟು)ಪಾಪ್‌ಕಾರ್ನ್ ಉಡುಗೊರೆಯಾಗಿ ದೊರೆಯಿತು.ಇವಾಗ ನನಗೆ ನಮ್ಮ ಸ್ಥಿತಿನೊಡಿ ನಗಬೇಕೊ , ಅಳಬೇಕೊ ಗೊತ್ತಾಗಲಿಲ್ಲ!!!ಸಿನಿಮಾ ೧:೩೦ ಕ್ಕೆ ಮುಗಿಯಿತು.ಎಲ್ಲೂ ಆಕಲಿಸಲಿಲ್ಲ.ಚೆನ್ನಾಗಿ ನಕ್ಕಿದೆವು.ಪ್ರೀತಿ ಪ್ರೇಮ ಅಂಥ ಜಂಜಾಟವಿಲ್ಲ.ಕೊನೆಗೂ ನಗು ನಗುತ್ತಾ ಸಿನಿಮಾ ತಿಯೇಟರ್ ಇಂದ ಹೊರಬಂದೆವು.ಅವಿರತ ಗ್ರೂಪಿಂದ ಹಿಂದೆ ಬೇರು, ನಾಯಿ ನೆರಳು ನೂಡಿದ್ದೆ.ಇವತ್ತು #೭೩ ಶಾಂತಿ ನಿವಾಸ.ಹೀಗೆ ಒಳೊಳ್ಳೆಯ ಸಿನಿಮಾಗಳನ್ನು ಪ್ರದರ್ಶಿಸಲಿ ಎಂದು ಆಶಿಸುವೆ.ಮನೆಗೆ ಆ ಚಳಿಯಲ್ಲಿ ರಾತ್ರಿ ಬಂದಾಗ ೨:೩೦. ಆ ಆ ಆ ಅ ಮ್ ಮ್ ಮೈ ನಡುಗುತಿತ್ತು.ನನ್ನ ಅದೃಷ್ಟ ಮರುದಿನ ಭಾನುವಾರ.ಎದ್ದಾಗ ೧೦:೦೦ !!!
ಒಟ್ಟಿನಲ್ಲಿ ೩೦೦/- ಕೊಟ್ಟು ಹೊಗಿದಕ್ಕು ಸಾರ್ಥಕ. ರೋಟರಿಯವರ ಉದ್ದೇಶ ಒಳ್ಳೇದು, ಅದರಲ್ಲಿ ನಮ್ಮದೂ ಕಿರು ಕಾಣಿಕೆ.

1 comment:

Vinay hosamani said...

am too late to post here,
a very nice review indeed. and "73 Shanthi Nivas"
and i thing the significance of 73 is "i believe" from the release year of the original film which "73 Shanthi Nivas" has been inspired :)
"Bawarchi" 1972 film was a huge hit and the name of the house where the story begins is called obviously Shanthi Nivas
35 year olde movie still aprreciated and relavent to the modren days.

hants off to the Directory Hrishikesh mukherji

http://en.wikipedia.org/wiki/Bawarchi